User:Mavrellobo/Christ University

ಕ್ರೈಸ್ಟ್ ವಿಶ್ವವಿದ್ಯಾಲಯ
Mottoಶ್ರೇಷ್ಠತೆ ಮತ್ತು ಸೇವೆ
Typeಖಾಸಗೀ
Established15 ಜುಲೈ 1969
Vice-Chancellorಡಾ|ವಂ| ಥೋಮಸ್ ಸಿ.ಥೋಮಸ್, ಸಿಎಂಐ[1]
Students12000
Location, ,
ಭಾರತ

12°56′5″N 77°36′19″E / 12.93472°N 77.60528°E / 12.93472; 77.60528
Campusನಗರ
Websitewww.christuniversity.in
ಕ್ರೈಸ್ಟ್ ವಿಶ್ವವಿದ್ಯಾಲಯ
ಪ್ರಧಾನ ಆಡಿಟೋರಿಯಂನ ಒಳಾಂಗಣ ನೋಟ

ಕ್ರೈಸ್ಟ್ ವಿಶ್ವವಿದ್ಯಾಲಯ ಒಂದು 'ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ' ಇದು ಭಾರತದ ಕರ್ನಾಟಕದಲ್ಲಿನ ಬೆಂಗಳೂರಿನಲ್ಲಿದೆ, . ಈ ಸಂಶ್ಥೆಯು ೧೯೬೯ ರಲ್ಲಿ ಸ್ಥಾಪಿತಗೊಂಡಿದ್ಧು, ಆಡಳಿತವು ಯಾಜಕ ವರ್ಗದವರಾದ ಕಾರ್ಮಲೈಟ್ಸ್ ಆಫ್ ಮೇರಿ ಇಮ್ಮಾಕ್ಯುಲೇಟ್ (ಸಿಎಂಐ), ಭಾರತದಲ್ಲಿ ಪ್ರಪ್ರಥಮ ಸ್ಥಳೀಯ ಸಿರಿಯನ್ ಕಥೋಲಿಕ್ ಧಾರ್ಮಿಕ ಸಭೆಗೆ ಸೇರಿದೆ. ೨೦೦೮ ರಲ್ಲಿ ಈ ಕಾಲೇಜಿಗೆ 'ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ' ಎಂಬ ಮಾನ್ಯತೆ ದೊರಕಿದೆ. ಭಾರತದಲ್ಲಿ ಈ ಸಂಸ್ಥೆಯು ಅಗ್ರ ಸ್ಥಾನದಲ್ಲಿರುವುದೇ ಅಲ್ಲದೇ ಸಾಮಾನ್ಯವಾಗಿ ದೇಶದ ಅನೇಕ ಶೀಕ್ಷಣಕ್ಕೆ ಸಂಬಂಧಿಸಿದ ಸಮೀಕ್ಷೆಗಳಲ್ಲಿ ಇದನ್ನು ಉತ್ತಮವಾದ ಶೈಕ್ಷಣಿಕ ಸಂಸ್ಥೆ ಎಂದು ಪಟ್ಟಿ ಮಾಡಲಾಗಿದೆ. ೨೦೧೪ರಲ್ಲಿ ನಡೆದ ಇಂಡಿಯಾ ಟುಡೇ-ನೀಲ್ಸನ್ ಸಮೀಕ್ಷೆಯಲ್ಲಿ ಈ ಸಂಸ್ಥೆಯು ವಿಜ್ಞಾನ, ಕಲಾ, ವಾಣೀಜ್ಯ ಹಾಗೂ ಕಾನೂನು ವಿಭಾಗಗಳಲ್ಲಿ ಮೊದಲನೇ ಹತ್ತು ಸ್ಥಾನಗಳನ್ನು ಪಡೆದುಕೊಂಡಿದೆ. ೨೦೧೪ರ ಇಂಡಿಯಾ ಟುಡೇ-ನೀಲ್ಸನ್ ಸಮೀಕ್ಷೆಯಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವು ಬಿ.ಬಿ.ಎ. ೧ನೇ ಸ್ಥಾನ, ಕಲಾ ವಿಭಾಗ ೬ನೇ ಸ್ಥಾನ, ವಿಜ್ಞಾನ ೪ನೇ ವಿಭಾಗ ಮತ್ತು ೪ನೇ ಸ್ಥಾನದಲ್ಲಿ ವಾಣಿಜ್ಯ ಹಾಗೂ ಕಾನೂನು ೧೦ನೇ ಸ್ಥಾನಗಳನ್ನು ಪಡೆದಿತ್ತು.[2]

File:ಕ್ರೈಸ್ಟ್ ವಿಶ್ವವಿದ್ಯಾಲಯದಿಂದ ಚಿತ್ರಿಸಿದ ತಾವರಕೆರೆಯ ವೈಮಾನಿಕ ದೃಶ್ಯ.jpg
ಕ್ರೈಸ್ಟ್ ವಿಶ್ವವಿದ್ಯಾಲಯದ ಬ್ಲಾಕ್-೧, ಬ್ಲಾಕ್-೨, ಮತ್ತು ಪ್ರಮುಖ ಲೈಬ್ರರಿಗಳ ವೈಮಾನಿಕ ಚಿತ್ರ

ವಿಶ್ವವಿದ್ಯಾಲಯವು ರಾಷ್ಟ್ರೀಯ ಹಾಗೂ ಅಂರ್ತರಾಷ್ಟ್ರೀಯ ಮಾನ್ಯತೆ ಹೊಂದಿದ ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ಕಾರ್ಯಕ್ರಮಗಳನ್ನು(ಕೋರ್ಸುಗಳನ್ನು) ತನ್ನ ವಿವಿಧ ವಿಭಾಗಗಳಾದ ಕಾನೂನು, ಬ್ಯುಸಿನೆಸ್ ಆಡ್ಮಿನಿಸ್ಟ್ರೇಷನ್, ವಾಣಿಜ್ಯ, ಮ್ಯಾನೇಜ್ಮೆಂಟ್, ಮಾನವಿಕ, ವಿಜ್ಞಾನ, ಹಾಗೂ ಸಾಮಾಜಿಕ ವಿಜ್ಞಾನಗಳಲ್ಲಿ ಸೇರಿಸಿದೆ. ಇದರ ಜೊತೆಯಲ್ಲಿಯೇ, ಅನೇಕ ವೃತ್ತಿಪರ ಕೋರ್ಸುಗಳೂ ಸೇರಿದ ಬ್ಯುಸಿನೆಸ್ ಮ್ಯಾನೇಜ್ಮೆಂಟ್, ಕಂಪ್ಯೂಟರ್ ಆಪ್ಲಿಕೇಶನ್ಸ್, ಹೊಟೇಲ್ ಮ್ಯಾನೇಜ್ಮೆಂಟ್, ಸಮೂಹ ಸಂವಹನ, ಸಮಾಜ ಸೇವೆ, ಎಂಜಿನಿಯರಿಂಗ್ ಮತ್ತು ಪ್ರವಾಸೋದ್ಯಮಗಳನ್ನು ಕಲಿಯುವ ಅವಕಾಶ ಕಲ್ಪಿಸಿದೆ. ವಿದೇಶದ ವಿದ್ಯಾಥಿ‍ಗಳಿಗೆ ಇದೊಂದು ನೆಚ್ಚಿನ ತಾಣವಾಗಿದ್ದು, ೨೦೧೪ರಲ್ಲಿ ಇಲ್ಲಿಗೆ ಬರುವ ವಿದೇಶೀ ವಿದ್ಯಾರ್ಥಿಗಳ ಸಂಖ್ಯೆ ೨,೩೮೪ಕ್ಕೆ ಏರಿದೆ.[3][4]

೧೭ ಜೂನ್ ೧೯೭೨ ರಂದು ಕ್ರೈಸ್ಟ್ ಕಾಲೇಜು ಭಾರತದ ವಿಶ್ವವಿದ್ಯಾಲಯ ಧನಸಹಾಯ ಆಯೋಗ, (ಯುಜಿಸಿ)ದ ಮಾನ್ಯತೆ ಪಡೆದಿದೆ. ೧೯೯೮ರಲ್ಲಿ ಪರೀಕ್ಷಾ ಮಾನ್ಯತೆಗ ರಾಷ್ಟ್ರೀಯ ಪರೀಕ್ಷೆ ಹಾಗೂ ಮಾನ್ಯತಾ(ಎನ್ಎಎಸಿ), ಒಂದು ಯುಜಿಸಿ-ಅನುದಾನಿತ ಅಂಗ ಸಂಸ್ಥೆ, ಎಂದು ಗುರುತಿಸಲಾಯಿತು, ಮತ್ತೆ ೨೦೦೫ರಲ್ಲಿ ಇದನ್ನು ಮರು-ಮಾನ್ಯತೆಗೆ ಒಳಪಡಿಸಲಾಯಿತು. ಗುಣಮಟ್ಟದ ಶಿಕ್ಷಣಕ್ಕಾಗಿ ರಾಜ್ಯದಲ್ಲಯೇ ಕ್ರೈಸ್ಟ್ ಕಾಲೇಜು ಮೊದಲನೆಯದಾಗಿದೆ,ಕರ್ನಾಟಕಇದನ್ನೇ ರಾಷ್ಟ್ರೀಯ ಪರೀಕ್ಷೆ ಹಾಗೂ ಮಾನ್ಯತಾ (ಎನ್ಎಎಸಿ), ಗುಣಮಟ್ಟದ ಶಿಕ್ಷಣಕ್ಕಾಗಿ ಗುರುತಿಸಿತು. ಪ್ರಸ್ತುತ ಈ ವಿಶ್ವವಿದ್ಯಾಲಯವು ಎನ್ಎಎಸಿ-ಯಿಂದ A+ ಮಾನ್ಯತೆಯನ್ನು ಹೊಂದಿದ ಸಂಸ್ಥೆ ಅಲ್ಲದೇ ಉತ್ಕೃಷ್ಟ ಸಾಧನೆಯ ಸಾಮರ್ಥ್ಯವಿರುವ ಸಂಸ್ಥೆ ಎಂದು ಪರಿಗಣಿಸಲಾಗಿದೆ.[5]

ಕ್ಯಾಂಪಸ್ (ಸಂಸ್ಥೆ ಆವರಣ) edit

೨೦೦೦-೨೦೦೨ ದಿಂದ ಮೂರು ವರ್ಷಗಳು ಸತತವಾಗಿ ವಿಶ್ವವಿದ್ಯಾಲಯವನ್ನು 'ಉತ್ತಮ ಕಟ್ಟಡ ಮತ್ತು ಉದ್ಯಾನ' ಹೊಂದಿದ ಆವರಣ ಎಂದು ಬೆಂಗಳೂರು ನಗರ ಆರ್ಟ್ಸ್(ಕಲಾ) ಆಯೋಗವು ಪ್ರಮಾಣಿಸಿದೆ. ೨೦೧೨ನೇ ವರ್ಷವನ್ನೂ ಸೇರಿಸಿ ೨೪ ನಿರಂತರ ವರರ್ಷಗಳಿಗೆ ಮೈಸೂರು ತೋಟಗಾರಿಕಾ ಇಲಾಖೆಯಿಂದ ನೀಡಲಾಗುವ 'ಅತ್ಯುತ್ತಮ ಸಾಂಸ್ಥಿಕ ಉದ್ಯಾನ' ಎಂಬ ಪ್ರಶಸ್ತಿಯನ್ನು ಈ ವಿಶ್ವವಿದ್ಯಾಲಯವು ಪಡೆದಿರುತ್ತದೆ.[citation needed] ಈ ಆವರಣವು ಶೂನ್ಯ ತ್ಯಾಜ್ಯ ಪರಿಸರವನ್ನು ಹೊಂದಿದ್ದು, ಮಾತ್ರವಲ್ಲದೇ ಇಲ್ಲಿ ಉಪಯೋಗಿಸಿದ ಪೇಪರ್ ಹಾಗೂ ದ್ರವ ರೂಪದ ವಸ್ತುಗಳನ್ನು ಮರುಬಳಕೆಯ ವಸ್ತುಗಳನ್ನಾಗಿ ಮಾರ್ಪಡಿಸಲಾಗುತ್ತದೆ.[6] ಗುರುತಿನ ಚೀಟಿ ಹಾಗೂ ಡೆಬಿಟ್ ಕಾರ್ಡ್-ಗಳನ್ನು ಒಂದರಲ್ಲೇ ನಮೂದಿಸಿ ಕ್ಯಾಂಪಸ್-ನಲ್ಲಿ ದ್ರವರೂಪದ ಹಣದ ಉಪಯೋಗವನ್ನು ಕಡಿಮೆ ಮಾಡಲಾಗಿದೆ. ಈ ಗುರುತಿನ ಚೀಟಿ ಹೊಂದಿದ ಸ್ಮಾರ್ಟ್ ಎಟಿಎಂ ಕಾರ್ಡ್-ನ್ನು ಸೌತ್ ಇಂಡಿಯನ್ ಬ್ಯಾಂಕು ಒದಗಿಸುತ್ತದೆ ಸೌತ್ ಇಂಡಿಯನ್ ಬ್ಯಾಂಕ್[7]

ವಾಸ್ತುಶಿಲ್ಪ edit

ಕ್ರೈಸ್ಟ್ ವಿಶ್ವವಿದ್ಯಾಲಯವು ೬ ಕಟ್ಟಡಗಳನ್ನು ಹೊಂದಿದ್ದು, ಅವುಗಳನ್ನು ಕ್ರಮೇಣ ಬ್ಲಾಕ್-೧, ಬ್ಲಾಕ್-೨, ಬ್ಲಾಖ್-೩, ಬ್ಲಾಖ್-೪, ಕೇದ್ರೀಯ ಕಟ್ಟಡ, ಆಡಿಟೋರಿಯಂ ಕಟ್ಟಡ ಎಂದು ಹೆಸರಿಸಲಾಗಿದೆ. ಬ್ಲಾಕ್-೧'ರಲ್ಲಿ ಮೊದಲ ವರ್ಷದ ಬಿ.ಎ., ಬಿ.ಎಸ್ಸಿ ತರಗತಿಗಳು ನಡೆಯುತ್ತವೆ, ಇದು ಕ್ರೈಸ್ಟ್ ಕಾಲೇಜು ವಿಶ್ವವಿದ್ಯಾಲುವಾಗುವಕ್ಕಿಂತಲೂ ಕ್ರೈಸ್ಟ್ ಕಾಲೇಜಿನ ಮುಖ್ಯ ಆಡಳಿತ ಕಟ್ಟಡವಾಗಿತ್ತು. ಬ್ಲಾಖ್-೨'ರಲ್ಲಿ ಬಿ.ಕಾಂ. ಹಾಗೂ ಕೆಲವೊಂದು ಬಿ.ಎಸ್ಸಿ. ತರಗತಿಗಳು ನಡೆಯುತ್ತವೆ. ಬ್ಲಾಕ್-೩'ರಲ್ಲಿ ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಬ್ಲಾಕ್-೪'ರಲ್ಲಿ ಪ್ರವಾಸೋದ್ಯಮ ಮತ್ತು ಗೌರವವಾನ್ವಿತ ಕೋರ್ಸುಗಳನ್ನು ಕಲಿಸಲಾಗುತ್ತದೆ. ಕೇಂದ್ರ ಕಟ್ಟಡವು ಸ್ನಾತಕೋತ್ತರ, ಕಾನೂನು ಮತ್ತು ವಿಶ್ವವಿದ್ಯಾಲಯದ ಪ್ರಮುಖ ಆಡಳಿತ ಮಂಡಳಿಯ ಕಛೇರಿಗಳಾದ, ಉಪ-ಕುಲಪತಿಗಳ ಕಛೇರಿ, ವಿಶ್ವವಿದ್ಯಾಲಯದ ಕಛೇರಿ ಮತ್ತು ಐಪಿಎಂ-ಗಳನ್ನು ಹೊಂದಿದೆ. ಇದರಲ್ಲಿ ಪ್ರಪಂಚದಾದ್ಯಂತ ಬಿತ್ತರಿಸಿದ ೧,೮೦,೦೦೦ ಪುಸ್ತಕ, ೪೦೦ ಪತ್ರಿಕೆ-ಪ್ರಕಟಣೆಗಳನ್ನು ಜ್ಞಾನ ಕೇಂದ್ರವೂ ಇದೆ.[8] ಆಡಿಟೋರಿಯಂನ ಕಟ್ಟಡದಲ್ಲಿ ಕ್ರೈಸ್ಟ್ ಪದವಿಫೂರ್ವ ಕಾಲೇಜು ಹಾಗೂ ಇದೇ ಕಟ್ಟಡದಲ್ಲಿ ೪,೦೦೦ ಪ್ರೇಕ್ಷಕರಿಗೆ ಏಕಕಾಲದಲ್ಲಿ ಆಸೀನವನ್ನು ಒದಗಿಸುವ ಕ್ರೈಸ್ಟ್ ವಿಶ್ವವಿದ್ಯಾಲಯದ ಮುಖ್ಯ ಆಡಿಟೋರಿಯಂ ಸಹ ಇದೆ.

ವಸತಿ edit

ಮುಖ್ಯ ಕ್ಯಾಂಪಸ್-ನಲ್ಲಿ ೩೦೦ ವಿದ್ಯಾರ್ಥಿನಿಯರು ವಾಸಿಸುವ ಜೋನಾಸ್ ಸಭಾಂಗಣ ಮತ್ತು ೨೬೦ ವಿದ್ಯಾರ್ಥಿಗಳು(ಹುಡುಗರು) ವಾಸಿಸುವ ಕ್ರೈಸ್ಟ್ ಸಭಾಂಗಣವನ್ನು ನಿರಮ್ಇಸಲಾಗಿದೆ. ೧೦೦೦ ಹುಡುಗ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯ ಒದಗಿಸುವ ದೆವಡನ್ ಸಭಾಂಣವು ವಿಶ್ವವಿದ್ಯಾಲಯದ ಕೆಂಗೇರಿ ಆವರಣದಲ್ಲಿದ್ದು, ಕ್ರೈಸ್ಟ್ ವಿಶ್ವವಿದ್ಯಾಲಯವು ೨೦೦ ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ವಸತಿಯನ್ನು ಕಲ್ಪಿಸುತ್ತದೆ. ವಿಶ್ವವಿದ್ಯಾಲಯವು ೫೦೦ ಹುಡುಗ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಸತಿಯನ್ನು ಆವರಣದ ಹೊರಗಿನ ಪ್ರದೇಶದಲ್ಲಿ ಕಲ್ಪಿಸುತ್ತದೆ.[citation needed]

ಸಂಸ್ಥೆ ಮತ್ತು ಆಡಳಿತ edit

ವಿಶ್ವವಿದ್ಯಾಲಯದ ಆವರಣವು ಬೆ<ಗಳೂರಿನ ಕೇದ್ರ ಭಾಗದಲ್ಲಿದ್ದು ಬಹು ವಿಸ್ರೀರ್ಣತೆಯನ್ನು ಹೊಂದಿದೆ. 25 acres (10 ha) ಇದು 100-acre (40 ha) ಧರ್ಮರಾಂ ಕಾಲೇಜಿನ(ವಿದ್ಯಾಕ್ಷೇತ್ರಂ)ಆವರಣದ ಬೆಂಗಳೂರು ನಗರ ವ್ಯಾಪ್ತಿಯಲ್ಲಿದೆ. ಈ ಆವರಣದ ವಿಸ್ತರಣೆಯು ಹೊಸೂರು ರಸ್ತೆ (NH 7) ಬೆಂಗಳೂ ಡೈರಿ ಫ್ಲೈಓವರ್-ನ ವಿರುದ್ದ ದಿಕ್ಕಿನಲ್ಲಿದೆ.

೨೦೦೯ರಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವು ೭೫ ಎಕರೆ ಜಮೀನನಲ್ಲಿ ಪರಿಸರ ಸ್ನೇಹಿ ಆವರಣವನ್ನು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕೆಂಗೇರಿ SH 17ಕಾರ್ಯಾರಂಭಗೊಳಿಸಿತು. ಇದರಲ್ಲಿ ಎಂಜಿನೀಯರಿಂಗ್, ಪದವಿಫೂರ್ವ ವಸತಿ ಕಾಲೇಜು ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯದ ಮ್ಯಾನೇಜ್ಮೆಂಟ್ (ಸಿಯುಐಎಂ) ಕೋರ್ಸುಗಳನ್ನು ಪ್ರಾರಂಭಿಸಿದೆ. ನಗರದಲ್ಲಿರುವ ಕಾಲೇಜು ಆವರಣವು ಬೆಂಗಳೂರಿನ ಪ್ರಮುಖ ವಸತಿ ಹಾಗೂ ವಾಣಿಜ್ಯ ತಾಣಗಳಾದ ಬಿಟಿಎಂ ವಸತಿ ಸಮುಚ್ಚಯಕ್ಕೆ ಬಲು ಹತ್ತಿರವಾಗಿದ್ದು, ನಗರದ ಪ್ರಖ್ಯಾತ ವಸತಿ ನಿಲಯಗಳ ಪೈಕಿ ಒಂದಾದ ಕೋರಮಂಗಲ, ಹಾಗೂ ಜಯನಗರ.

ವಿಶ್ಚವಿದ್ಯಾಲಯವು ಭಾರತದ ವಿವಿಧ ಪ್ರದೇಶಗಳಿಂದ ಹಾಗೂ ಪ್ರಪಂಚದ ಕೆಲವು ಭಾಗಗಳಿಂದ ಬಂದಂತಹ ೧೨,೦೦೦ ವಿದ್ಯಾರ್ಥಿ ವೃಂದ ಮತ್ತು ೫೦೦ ಮಂದಿಯ ಶಿಕ್ಚಕ ವರ್ಗವನ್ನು ಹೊಂದಿದೆ.[9]

ಶೈಕ್ಷಣಿಕ edit

ಕ್ರೈಸ್ಟ್ ವಿಶ್ವವಿದ್ಯಾಲಯ ಪ್ರಮಾಣೀಕೃತ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಮತ್ತು ಸಂಶೋಧನೆ, ಕೋರ್ಸುಗಳನ್ನು ತನ್ನ ಶೈಕ್ಷಣಿಕ ಪರಿಧಿಗೊಳಪಟ್ಟ ವಿಭಾಗಗಳಾದ ಕಾನೂನು ಶಾಲೆ, ಶಿಕ್ಷಣ, ವಿಜ್ಞಾನ, ಸಾಮಾಜಿಕ ವಿಜ್ಞಾನ ಮತ್ತು ವಿವಿಧ ಭಾಷೆಗಳು, ವಾಣೀಜ್ಯ ಮತ್ತು ಮ್ಯಾನೇಜ್ಮೆಂಟ್ ಹಾಗೂ ಎಂಜಿನಿಯರಿಂಗ್-ನಲ್ಲಿ ಶೀಕ್ಷಣವನ್ನು ನೀಡುತ್ತಿದೆ.[10] ೨೦೦೫ರಲ್ಲಿ, ಆಗಿನ ಕ್ರೈಸ್ಟ್ ಕಾಲೇಜು (ಪ್ರಸ್ತುತ ಕ್ರೈಸ್ಟ್ ವಿಶ್ವವಿದ್ಯಾಲಯ) ಎನ್ಎಎಸಿಯಿಂದ A+ ಪಡೆದ ದಕ್ಷಿಣ ಬಾರತದಲ್ಲೇ ಪ್ರಥಮ ಹಾಗೂ ಏಕೈಕ ಶೀಕ್ಷಣ ಸಂಸ್ಥೆಯಾಗಿದೆ.[9]

ಪದವಿ ಕೋರ್ಸುಗಳು edit

ವಿಶ್ವವಿದ್ಯಾಲಯವು ೪೫ ಪದಿ ಕೋರ್ಸುಗಳನ್ನು ಮಾನವಿಕ, ಸಾಮಾಜಿಕ ವಿಜ್ಞಾನ, ವಿಜ್ಞಾನ, ವಾಣಿಜ್ಯ ಮತ್ತು ಮ್ಯಾನೇಜ್ಮೆಂಟ್, ಕಾನೂನು, ಶಿಕ್ಷಣ, ಹಾಗೂ ಎಂಜಿನಿಯರಿಂಗ್ ವಿಭಅಗಗಳಲ್ಲಿ ಪರಿಚಯಿಸಿದೆ. ಪದವಿ ಕೋರ್ಸುಗಳು ಮೂರು ವರ್ಷಗಳ ಕಾರ್ಯಕ್ರಮವನ್ನು ಹೊಂದಿದ್ದು ಇದರಲ್ಲಿ ಶೀಕ್ಷಣ ಪದವಿ (ಬಿ.ಎಡ್, ಎರಡು ವರ್ಷ), ಹೊಟೇಲ್ ಮ್ಯಾನೇಜ್ಮೆಂಟ್ ಪದವಿ (ಬಿ.ಹೆಚ್.ಎಮ್, ನಾಲ್ಕು ವರ್ಷ), ಕಾನೂನು ಪದವಿ (ಎಲ್.ಎಲ್.ಬಿ, ಐದು ವರ್ಷ), ತಾಂತ್ರಿಕ ಪದವಿ (ಬಿ.ಟೆಕ್, ನಾಲ್ಕು ವರ್ಷ) ಮತ್ತು ಸಮಗ್ರ ಬಿ.ಟೆಕ್ / ಎಮ್.ಟೆಕ್ ಅಥವಾ ಎಂ.ಬಿ.ಎ. (ಐದು ವರ್ಷ)ಆಗಿರುತ್ತದೆ.

ಮೂರು ಕೋರ್ಸುಗಳನ್ನು ಅಂದರೆ ಬ್ಯುಸಿನೆಸ್ ಆಡ್ಮಿನಿಸ್ಟ್ರೇಷನ್ (ಬಿ.ಬಿ.ಎ), ವಾಣಿಜ್ಯ ಪದವಿ (ಬಿಕಾಂ), ಕಲಾ ಪದವಿ (ಬಿಎ) ಮತ್ತು ವಿಜ್ಞಾನ ಪದವಿ (ಬಿಎಸ್ಸಿ) ಹೊರತುಪಡಿಸಿ ಮೂರು ಪ್ರಮುಖ ಎಲ್ಲವುದಕ್ಕೂ ಒಂದು ವ್ಯವಸ್ಥೆಯಿಂದ ಕೂಡಿವೆ.[10]

ಪದವಿ ಕೋರ್ಸುಗಳಲ್ಲಿ ವಿಕಿಪೀಡಿಯ edit

 
ದ್ವಿತೀಯ ಭಾಷಾ ವಿದ್ಯಾರ್ಥಿಗಳಿಗೆ ವಿಕಿಪೀಡಿಯ ಕಾರ್ಯಾಗಾರ

ವಿಶ್ವವಿದ್ಯಾಲಯವು, ಬೆಂಗಳೂರಿನಲ್ಲಿರುವ ಅಂರ್ತಜಾಲ ಮತ್ತು ಸಮಾಜ ಸಂಸ್ಥ (ಸಿಎಸ್ಐ)ಜೊತೆಗೂಡಿ ಮಾಡಿದ ಒಪ್ಪಂದ(ಎಂಒಯು)ದ ಮೇರೆಗೆ, ೧೬೦೦ ವಿದ್ಯಾರ್ಥಿಗಳು ವಿಕಿಪೀಡಯ ಅಂರ್ತಜಾಲಕ್ಕೆ ನಿರಂತರವಾಗಿ ಹಿಂದಿ, ಕನ್ನಡ, ತಮಿಳು, ಸಂಸ್ಕೃತ, ಮತ್ತು ಉರ್ದು ಭಾಷೆಗಳಲ್ಲಿ ಲೇಖನಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ವಿಕಿಪೀಡಿಯಾದ ಮೊದಲ ಟ್ಯುಟೋರಿಯಲ್ಸ್ ಚಿತ್ರೀಕರಣವನ್ನು ವಿಶ್ಚವಿದ್ಯಾಲಯದ ಸ್ಟುಡಿಯೋದಲ್ಲಿ ಮಾಡಲಾಗಿದೆ.[11]

The ಹಿಂದಿ and ಕನ್ನಡ ಲೇಖನಗಳನ್ನು ಇಲ್ಲಿ ಓದಬಹುದು collection of Hindi articles and ಕನ್ನಡ ಲೇಖನಗಳ ಸಂಗ್ರಹ

ಪದವಿ ಕೋರ್ಸುಗಳು edit

ವಿಶ್ವವಿದ್ಯಾಲಯವು ೪೪ ಸ್ನಾತಕೋತ್ತರ, ೧೬ ಎಂ.ಫಿಲ್ ಮತ್ತು ೧೭ ಪಿ.ಹೆಚ್.ಡಿ ಕಾರ್ಯಕ್ರಮಗಳನ್ನು ಮಾನವಿಕ, ಸಾಮಾಜಿಕ ವಿಜ್ಞಾನ, ವಿಜ್ಞಾನ, ಕಾನೂನು, ಶೀಕ್ಷಣ, ವಾಣೀಜ್ಯ ಮತ್ತು ಮ್ಯಾನೇಜ್ಮೆಂಟ್, ಹಾಗೂ ಎಂಜಿನಿಯರಿಂಗ್ ವಿಭಾಗಗಳಲ್ಲಿ ಕೋರ್ಸುಗಳನ್ನು ನೀಡುತ್ತಿದೆ. ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳು ಎರಡು ವರ್ಷ ಅವಧಿಯನ್ನು ಹೊಂದಿದ್ದೂ, ಇದರಲ್ಲಿ ಕಂಪ್ಯೂಟರ್ ಸ್ನಾತಕೋತ್ತರ ಮತ್ತು ಕಾನೂನು ಸ್ನಾತಕೋತ್ತರ ಪದವಿಗಳು ಕ್ರಮೇಣವಾಗಿ ಮೂರು ವರ್ಷ ಹಾಗೂ ಒಂದು ಅವಧಿಯನ್ನು ಹೊಂದಿರುತ್ತದೆ.

ಉನ್ನತ ಶಿಕ್ಷಣ ಶ್ರೇಯಾಂಕಗಳು edit

ಇಂಡಿಯಾ ಟುಡೇ ಕೆಳಗೆ ವಿಸ್ತರಿಸಿದ ಪಟ್ಟಿಗಳಲ್ಲಿ 'ಇಂಡಿಯಾ ಟುಡೇ' ವಾರ ಪ್ತ್ರಿಕೆಯು ನಡೆಸಿದ ಶೈಕ್ಷಣಿಕ ಸಮೀಕ್ಷೆಯಲ್ಲಿ ೨೦೧೫ರವರೆಗೆ ಭಾರತದಲ್ಲಿ ವಿಶ್ವವಿದ್ಯಾಲಯಕ್ಕೆ ಸಿಕ್ಕಿದ ವಿವಿಧ ಶ್ರೇಣಿ ಹಾಗೂ ಅದರ ಕ್ರಮಾಂಕಗಳ ಸಂಕ್ಷಿಪ್ತ ವಿವರವನ್ನು ನೀಡಲಾಗಿದೆ. ಬಿಬಿಎ ಮತ್ತು ಬಿಸಿಎ ಕೋರ್ಸುಗಳನ್ನು ಉತ್ತಮ ಭಾರತದಲ್ಲಿ ಕಾರ್ಯಕ್ರಗಳೆಂದು ಇಲ್ಲಿ ಗುರುತಿಸಲಾಗಿದೆ. ವಿಶ್ವವಿದ್ಯಾಲಯವು ೨೦೧೨ ಸಮೀಕ್ಷೆಯಲ್ಲಿ ೩೧ನೇ ಸ್ಥಾನದಲ್ಲಿದ್ದು ಪ್ರಸ್ತುತ ೨೦೧೩ರ ಸಮೀಕ್ಷಯಲ್ಲಿ ೨೩ನೇ ಸ್ಥಾನವನ್ನು ಪಡೆದಿದೆ. ಇದೊಂದು ಖಾಸಗೀ ವಿಶ್ವವಿದ್ಯಾಲವಾಗಿದ್ದರೂ ಇದನ್ನು ಸರ್ಕಾರಿ ವಿಶ್ವವಿದ್ಯಾಲಯಗಳಷ್ಟೇ ಪ್ರಾಮುಖ್ಯತೆಯಿಂದ ನೋಡಿಕೊಳ್ಳುವುದು ಈ ಕ್ರೈಸ್ಟ್ ವಿಶ್ವವಿದ್ಯಾಲಯದ ವೈಶಿಷ್ಟ್ಯತೆಯನ್ನು ತೋರಿಸುತ್ತದೆ.[12]

೨೦೧೫ ರ 'ಇಂಡಿಯಾ ಟುಡೇ' ನಡೆಸಿದ ಖಾಸಗೀ ವಿಶ್ವವಿದ್ಯಾಲಯಗಳಲ್ಲಿ, ಕ್ರೈಸ್ಟ್ ವಿಶ್ವವಿದ್ಯಾಲಯವು [13] ಮೊದಲ ಸ್ಥಾನವನ್ನು ಪಡೆದಿರುತ್ತದೆ.

ಇಂಡಿಯಾ ಟುಡೇ ವಿಶ್ವವಿದ್ಯಾಲಯಗಳ ಶ್ರೇಯಾಂಕ [12]
Year Rank
೨೦೧೫ ೧೧
೨೦೧೪ ೧೮
೨೦೧೩ ೨೩
೨೦೧೨ ೩೧
ಇಂಡಿಯಾ ಟುಡೇ ಸ್ನಾತಕೋತ್ತರ ಪದವಿ ಶ್ರೇಯಾಂಕ [14]
Course ಶ್ರೇಯಾಂಕ ೨೦೦೫ ಶ್ರೇಯಾಂಕ ೨೦೦೬ ಶ್ರೇಯಾಂಕ ೨೦೦೭ ಶ್ರೇಯಾಂಕ ೨೦೦೮ ಶ್ರೇಯಾಂಕ ೨೦೦೯ ಶ್ರೇಯಾಂಕ ೨೦೧೦ ಶ್ರೇಯಾಂಕ ೨೦೧೧ ಶ್ರೇಯಾಂಕ ೨೦೧೨ ಶ್ರೇಯಾಂಕ ೨೦೧೩ ಶ್ರೇಯಾಂಕ ೨೦೧೪ ಶ್ರೇಯಾಂಕ ೨೦೧೫
ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಪದವಿ - - - - - - - -
ಕಂಪ್ಯೂಟರ್ ವಿಜ್ಞಾನ ಪದವಿ - - - - - - - -
ಸಮೂಹ ಸಂವಹನ - - - - - - - -
ವಿಜ್ಞಾನ ೧೦ ೧೦ ೧೦ ೧೩
ವಾಣಿಜ್ಯ - -
ಮಾನವವೀಯ - ೧೨ ೧೦
ಕಾನೂನು - - - - - - ೧೫ ೧೬ ೧೩ ೧೨ ೧೨

ದಿ ವೀಕ್ಹಂಸ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ, ದಿ ವೀಕ್-ಹಂಸ ಸಂಶೋಧನಾ ಸಮೀಕ್ಷಯನ್ನು ಹಮ್ಮಿಕೊಂದ್ದು, ಈ ಆಧಾರದ ಮೇರೆಗೆ ೨೦೧೫ರ ಪಟ್ಟಿಯನ್ನು ಕೆಳಗಡೆ ವಿಸ್ತರಿಸಲಾಗಿದೆ.

ದಿ ವೀಕ್-ಹಂಸ ಸಂಶೋಧನಾ ಸಮೀಕ್ಷೆ ೨೦೧೫[15]
Course Rank 2015
ಕಲೆ
ವಾಣಿಜ್ಯ
ವಿಜ್ಞಾನ
ಕಾನೂನು ೨೬
ಹೋಟೆಲ್ ಮ್ಯಾನೇಜ್ಮೆಂಟ್ ೧೫


ಸಹಯೋಗಗಳು edit

ಕ್ರಸ್ಟ್ ವಿಶ್ವವಿದ್ಯಾಲಯವು, ವಿದೇಶೀ ವಿಶ್ವವಿದ್ಯಾಲಯಗಳ ಒಕ್ಕೂಟದ ಸದಸ್ಯ ಸಂಸ್ಥೆಯಾಗಿದೆ(ಯುಎಸ್ಎಸಿ).[16]

ಕ್ರೈಸ್ಟ್ ವಿಶ್ವವಿದ್ಯಾಲಯವು ಇಲ್ಲಿ ತಿಳಿಸಿದ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಾಕ್ರಮಗಳನ್ನು ಹಮ್ಮಿಕೊಂಡಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ Western Michigan University, Catholic University of America ಮತ್ತು Baldwin Wallace University, Swansea University, Sheffield Hallam University, Liverpool Hope University ಯುನೈಟೆಡ್ ಕಿಂಗಡಮ್ (ಬ್ರಿಟನ್) ರಾಷ್ಟ್ರದಲ್ಲಿ, Griffith University ಆಸ್ಟ್ರೇಲಿಯಾದಲ್ಲಿ, Lille Catholic University ಪ್ರಾನ್ಸ್-ನಲ್ಲಿ ಮತ್ತು ನೆದರ್ಲ್ಯಾಂಡ್ ದೇಶದ ಎ.ನ್.ಹೆಚ್.ಟಿ.ವಿ. ವಿಶ್ವವಿದ್ಯಾಲಯದ of ಅಪ್ಲೈಡ್ ವಿಜ್ಞಾನ. ೨೦೧೩ರಲ್ಲಿ ಕೊರಿಯಾ ದೇಶದ ೬ ವಿಶ್ವವಿದ್ಯಾಲಯಗಳೊಂದಿಗೆ ಪರಸ್ಪರ ವಿನಿಮಯ ಒಪ್ಪಂದವನ್ನು ಮಾಡಲಾಗಿದೆ.[9]

ಭಾರತ ಗೇಟ್ವೇ ಕಾರ್ಯಕ್ರಮ edit

ವಿದೇಶೀ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಭಾರತ ವೀಕ್ಷಣೆಯನ್ನು ನೀಡುವ ಸಲುವಾಗಿ ಭಾರತ ಗೇಟ್ವೇ (ಐಜಿಪಿ)ಎಂಬ ಕಿರು-ಕಾರ್ಯಕ್ರಮವನ್ನು (IGP).[17][18]

ಲೈಬ್ರರಿಗಳು edit

ನಗರದ ಆವರಣದಲ್ಲಿ ಎರಡು ಲೈಬ್ರರಿಗಳು ಇವೆ: ಮುಖ್ಯ ಲೈಬ್ರರಿ ಮತ್ತು 'ಜ್ಞಾನ ಕೇಂದ್ರ' ವು ಕೇಂದ್ರ ಕಟ್ಟಡದ ಆರು, ಏಳು, ಎಂಟು ಮತ್ತು ಒಂಭತ್ತನೇ ಮಳಿಗೆಗಳಿಗೆ ವಿಸ್ತರಿಸಿದೆ.[9]

ಸಂಶೋಧನೆ edit

The University offers research programmes in the form of one and half year Master of Philosophy (MPhil) programmes and 5 year PhD programmes. The Centre for Research Projects offers grants to faculty members for Major Research Projects and Minor Research Projects, Monographs and Working Papers.

ಪ್ರಕಟಣೆ edit

ವಿಶ್ವವಿದ್ಯಾಲಯವು ಕನ್ನಡ ಸಂಘದಿಂದ ಸುಮಾರು ೨೨೦ ಕನ್ನಡಪುಸ್ತಕಗಳನ್ನು, ಇದೊಂದು ಲಾಭ-ರಹಿತ ವಿಶ್ವವಿದ್ಯಾಲಯದ ಸಂಘವಾಗಿದ್ದು ಕನ್ನಡವನ್ನು ಪ್ರಪಂಚದಾದ್ಯಂತ ಪಸರಿಸಲು ಪ್ರಯತ್ನಗಳನ್ನು ಮಾಡುತ್ತಿದ್ದುದಲ್ಲದೇ ಆರು ವಿರ್ಮಶಣಾ ಪತ್ರಿಕಾ ನಿಯತಕಾಲಿಕಗಳನ್ನು ಪ್ರಕಟಿಸಿದೆ:[9]

ಸಂಪ್ರದಾಯ ಮತ್ತು ವಿದ್ಯಾರ್ಥಿ ಚಟುವಟಿಕೆಗಳು edit

ಭಾಷಾ ಉತ್ಸವ edit

ವಿವಿಧ ಸಂಸ್ಕೃತಿ, ವೈವಿದ್ಯಮಯ ಕಲೆಗಳ ಆಚರಣೆ-ಅನಾವರಣೇ ಭಾಷಾ ಉತ್ಸವ. ಇದರಲ್ಲಿ ಡೊಳ್ಳು-ಕುಣಿತ, ಬಯಲಾಟ ಮತ್ತು ಇತರ ನೃತ್ಯ ಪದರ್ಶನಗಳು ಕಂಡುಬರುತ್ತದೆ. ಈ ಹಬ್ಬ ಭಾರತ ದೇಶದ ವಿವಧ ಸಂಸ್ಕೃತಿಯನ್ನು ತೋರ್ಪಡಿಸುತ್ತದೆ.[19] ಹಿಂದಿನ ವರ್ಷಗಳಲ್ಲಿ ಗಾರುಡಿ ಗೊಂಬೆ, ಚೆಂಡೆ ಸಿಂಗಾರ ಮೇಳ, ಕಳರಿಯಪಟ್ಟು, ವೇದ ಪಠಣ, ತಿರುವತ್ತಿರಕ್ಕಲ್, ರಬೀಂದ್ರ ಸಂಗೀತ, the ಕೇರಳ ನಟನಂ(ಕುಣೀತ), ಮೋಹಿನಿಯಾಟ್ಟಂ ಮತ್ತು ಕಥಕ್ಕಳಿಯ ತುಣುಕುಗಳನ್ನು ಪ್ರದರ್ಶಿಸಲಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತೀ ವರ್ಷದಲ್ಲಿ ಒಂದು ದಿನದ ಆಚರಣೆಯಾಗಿದ್ದು ವಿದ್ಯಾರ್ಥಿಗಳು ತಮ್ಮ-ತಮ್ಮ ಸಂಪ್ರದಾಯದ ಉಡುಪುಗಳನ್ನು ಧರಿಸಿ ಸಂಗೀತಗಾರರ ತಾಳಕ್ಕೆ ಹೆಜ್ಜೆ ಹಾಕುತ್ತಾರೆ.[20]

ರಂಗ-ಪ್ರಯೋಗ (ಥಿಯೇಟರ್) edit

ವಿಶ್ವವಿದ್ಯಾಲಯದಲ್ಲಿ ಕ್ರೀಯಾಶೀಲ ರಂಗತಂಡವಿದ್ದು, ವರ್ಷಕ್ಕೊಂದು ರಂಗಪ್ರಯೋಗವನ್ನು ಮಾಡಲಾಗುತ್ತದೆ. 'ಅಭಿಷೇಕ'(೨೦೧೪) ನಡೆಸಿದಂತಹ ಅತಿ ದೊಡ್ಡ ರಂಗಪ್ರಯೋಗವಾಗಿರುತ್ತದೆ.[21]

ಸದಸ್ಯತ್ವ edit

ವಿಶ್ವವಿದ್ಯಾಲಯವು ಭಾರತೀಯ ವಿಶ್ವವಿದ್ಯಾಲಯಗಳ ಸದಸ್ಯತ್ವವನ್ನು ಹೊಂದಿದೆ.[22]

ಜನರು edit

ಫ್ಯಾಕಲ್ಟಿ (ಶೀಕ್ಷಕ ವೃಂದ) edit

  • ಪ್ರೊ. ಸಿ. ಶ್ರೀನಿವಾಸರಾಜು, ಕನ್ನಡ ಸಂಘದ ಸ್ಥಾಪಕರಾಗಿದ್ದಾರೆ[23]
  • ಪ್ರೊ ಪಿ. ಕೃಷ್ಣಸ್ವಾಮಿ ಅವರು ಪೂರ್ಣಚಂದ್ರ ತೇಜಸ್ವಿಯವರ ಕನ್ನಡ ಕಾದಂಬರಿ 'ಚಿದಂಬರ ರಹಸ್ಯ'ದ ತಮಿಳು ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿದ್ದಾರೆ. [24]
  • ಡಾ| ಸುಧಾಮೂರ್ತಿ, ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷೆಯಾಗಿದ್ದಾರೆ[25]

ವಿದ್ಯಾರ್ಥಿ ವೃಂದ edit

ಹಳೇ ವಿದ್ಯಾರ್ಥಿ ವೃಂದ edit

ವಿಶ್ವ ದಾಖಲೆಗಳು edit

೧೦ ಜನವರಿ ೨೦೧೧ರಂದು, ಕ್ರೈಸ್ಟ್ ಪದವಿಪೂರ್ವ ಕಾಲೇಜು, ಬೆಂಗಳೂರು, ಇಲ್ಲಿ ನಿರ್ದೇಶಕ ವಿನೀತ್ ವಿನ್ಸೆಂಟ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮ 'ನೀವು ಬೀಟ್ ಬಾಕ್ಸ್ ಹೇಳಬಲ್ಲಿರಾ?' -ಇದು ೨೧೩೬ ಜನರ ಬಹುದೊಡ್ಡ ಭಾಗವಹಿಸುವಿಕೆಯಿಂದ ಲಿಮ್ಕಾ ವಿಶ್ವ ದಾಖಲೆ ಪುಸ್ತಕವನ್ನು ಸೇರಿತು.[31][32][33][34]

ವಿಶ್ವ ಗಿನ್ನೆಸ್ ದಾಖಲೆ ಪುಸ್ತಕದ ಪ್ರಕಾರ, ಅತ್ಯಂತ ಹೆಚ್ಚು ಜನರು ಭಅಗವಹಿಸಿದ ಬೀಟ್ ಬಾಕ್ಸ್ ಕಾರ್ಯಕ್ರಮ[35] ಕ್ರೈಸ್ಟ್ ವಿಶ್ವವಿದ್ಯಾಲಯದ ಸಾಧನೆ (India) in Bangalore, ಕರ್ನಾಟಕ, ಭಾರತ, on ೫ ಫೆಬ್ರುವರಿ ೨೦೧೧ under ಸಮಗ್ರ ನಿರ್ದೇಶಕರಾದ ವಿನೀತ್ ವಿನಸ್ಎಂಟ್ ಅವರ ನೇತ್ರತ್ವದಲ್ಲಿ ೧,೨೪೬ಜನರ ಭಾಗವಹಿಸುವಿಕೆ. ೧೪ ನವೆಂಬರ್ ೨೦೧೧ರಲ್ಲಿ ಶ್ಲೊಮೊ ೨,೦೮೧ ಜನರ ಭಾಗವಹಿಸುವಿಕೆಯಿಂದ ಈ ದಾಖಲೆಯು ಮುರಿಯಲ್ಪಟ್ಟಿತು.[36]

ವಿವಾದಗಳು edit

ಪ್ರಮಾನೀಕೃತ ವಿಶ್ವವಿದ್ಯಾಲಯ ಎಂಬ ಪತ್ರ ಪಡೆಯುವುದರಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯವು ವಿವಾದಕ್ಕೊಳಪಟ್ಟಿದೆ. ವಿಶ್ವವಿದ್ಯಾಲಯ ಎಂಬ ಪ್ರಮಾಣೀಕೃತ ಪತ್ರ ಸಿಗುವ ಮೊದಲು, ಇದು(ಬೆಂಗಳೂರು ವಿಶ್ವವಿದ್ಯಾಲಯ ಈ ಮೊಕದ್ದಮೆ) ವ್ಯಾಪ್ತಿಗೊಳಟ್ಟಿದ್ದು ಇದು "ಆಕ್ಷೇಪಣಾ ರಹಿತ ಪತ್ರ" (ಎನ್ಒಸಿ)ವನ್ನು ಯುಜಿಸಿಗೆ ಕಳುಹಿಸಿಕೊಡಬೇಕಿತ್ತು. ಎನ್ಒಸಿ ಪತ್ರವನ್ನು ನೀಡಲು ರಾಜ್ಯ ಸರ್ಕಾರ ತಿರಸಕರಿಸಿತು ಅಲದ್ಲೇ, ಬೆಂಗಳುರು ವಿಶ್ವವಿದ್ಯಾಲಯವು ಅಧಿಕೃತ ಎನ್ಒಸಿ-ಯನ್ನೂ ಕಳುಹಿಸಲಿಲ್ಲ. ಯುಜಿಸಿ-ಯು, ಬೆಂಗಳುರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕಳುಹಿಸಿದ ಪತ್ರದ ಮೆಲೆ ಅವಲಂಬಿಸಿತು.[37] ಈ ಪತ್ರವು ಕ್ರೈಸ್ಟ್ ವಿಶ್ವವಿದ್ಯಾಲಯವನ್ನು ೪೪ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸೇರಿಸಿ 'ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ' ಎಂದು ಘೋಷಿಸಿತು.[38] ಜುಲೈ ೨೦೧೪ ರಲ್ಲಿ ಯುಜಿಸಿ ಪ್ರಕಟಿಸಿದ ಅಂತಿಮ ಪಟ್ಟಿಯಲ್ಲಿ, ಕ್ರೈಸ್ಟ್ ವಿಶ್ಚವಿದ್ಯಾಲಯವನ್ನು ೪೪ ವಿಶ್ಚವಿದ್ಯಾಲಯಗಳಲ್ಲಿ ಒಂದಾಗಿ ಪ್ರಕಟಿಸಿತು.[39][40]

ಇದನ್ನೂ ನೋಡಿ edit

ಉಲ್ಲೇಖಗಳು edit

  1. ^ "CII speaker profile 2013" (PDF). website. Retrieved 24 March 2014.
  2. ^ http://indiatoday.intoday.in/bestcolleges/2014/ranks.jsp
  3. ^ http://indiatoday.intoday.in/story/india-today-best-colleges-2013-christ-university/1/280166.html
  4. ^ http://www.christuniversity.in/uploadimages/International%20Office%20(v1).pdf
  5. ^ "Selection of colleges under CPE scheme" (PDF). UGC. Retrieved 10 March 2014.
  6. ^ PS, Ramya (15 September 2010). "It's time for Bangalore colleges to go green". DNA. Retrieved 23 March 2014.
  7. ^ Kumar, Chethan. "ದ್ರವರೂಪದ ಹಣದ ಉಪಯೋಗಕ್ಕೆ ಕ್ರೈಸ್ಟ್ ಕಾಲೇಜಿನಲ್ಲಿ ಕಡಿವಾಣ". ಡೆಕ್ಕನ್ ಹೆರಾಲ್ಡ್. Retrieved 23 March 2014. {{cite news}}: Unknown parameter |ದಿನಾಂಕ= ignored (help)
  8. ^ https://christuniversitylibrary.wordpress.com/library-statistics/
  9. ^ a b c d e Aleem, Ayesha (24 June 2013). "Different Keystrokes". India Today. Retrieved 12 March 2014.
  10. ^ a b "Admissions". Website. Christ University. Retrieved 14 July 2013.
  11. ^ Muzammiluddin, Syed. "Wikipedia at Forefront in Christ University". Retrieved 20 March 2014.
  12. ^ a b Nayyar, Dhiraj (24 May 2013). "India Today ranks India's best universities for 2013". Magazine. Retrieved 20 March 2014.
  13. ^ Deka, Kaushik (13 July 2015). "Time to take the next big leap". Magazine. India Today. pp. 65–67.
  14. ^ The Best Colleges of India. India Today. 24 June 2013.
  15. ^ Chaudhury, Sharmista (21 June 2015). "A brave new 'blended' world". The Week. Retrieved 22 August 2015.
  16. ^ "Host University for Bangalore, India". website. Retrieved 20 March 2014.
  17. ^ "India Higher Education – Christ University". website. Retrieved 25 March 2014.
  18. ^ "India Gateway Program". website. Retrieved 25 March 2014.
  19. ^ "Bhasha utsav". The Hindu. Chennai, India. 9 September 2008. Retrieved 21 March 2014.
  20. ^ "ಸಾಂಸಸ್ಕೃತಿಕ ಹಬ್ಬ ಭಾಷಾ ಉತ್ಸವ". Deccan Herald. 9 September 2009. Retrieved 21 March 2014.
  21. ^ Philip, Zoya (2 March 2014). "Answering the curtain call". Deccan Chronicle.
  22. ^ http://www.aiuweb.org/Members/MembersC.asp
  23. ^ rao, H.S. Raghavendra (4 January 2008). "An exit from Kannada space". The Hindu. Chennai, India. Retrieved 21 March 2014.
  24. ^ Narayan, Swathi. "Hey, where's the divide?". Mid-Day. Mid-Day. Retrieved 25 April 2015.
  25. ^ [1], additional text.
  26. ^ Nagaraj, Nirmala (24 July 2010). "MIND OVER MATTER A special scholar". Retrieved 25 March 2014.
  27. ^ "TEDxChristUniversity". Website. Retrieved 25 March 2014.
  28. ^ "Making of Mindtree Part II(1999–2003)" (PDF). Retrieved 25 March 2014.
  29. ^ Alumni website http://genthimayya.org/?p=275. Retrieved 13 May 2014. {{cite web}}: Missing or empty |title= (help)
  30. ^ "Main News". The Tribune. 12 February 2010. Retrieved 13 May 2014.
  31. ^ "This world record will be a mouthful". Retrieved 1 June 2011.
  32. ^ "Christ College Sets National Beatboxing Record". Retrieved 1 June 2011.
  33. ^ "Christ University students attempt record in beatboxing". The Hindu. Chennai, India. 11 January 2011. Retrieved 1 June 2011.
  34. ^ "Christ Junior College beatboxers aim to set a new record". Retrieved 2 June 2011.
  35. ^ "Largest human beatbox ensemble". Retrieved 31 May 2011.
  36. ^ "Largest human beatbox ensemble". Retrieved 27 March 2012.
  37. ^ "Deemed status: Bangalore University breaks its own rules?". The Hindu. Chennai, India. 6 August 2008.
  38. ^ "Centre to derecognise 44 deemed universities". ndtv.com. Retrieved 22 January 2012.
  39. ^ http://www.careerindia.com/news/ugc-asks-34-blacklisted-deemed-universities-start-functioning-012255.html
  40. ^ http://courtnic.nic.in/supremecourt/temp/wc%20142rpt.txt

ಬಾಹ್ಯ ಆಧಾರಗಳು edit

Category:Christ University Category:Deemed universities in India Category:Educational institutions established in 1969 Category:Universities and colleges in Bangalore Category:Carmelite Order Category:Carmelite educational institutions Category:Roman Catholic universities and colleges in India Category:Pre University colleges in Karnataka Category:Association of Christian Universities and Colleges in Asia Category:1969 establishments in India