User:Chaithra B N Pojith/sandbox

KUMBE BETTA
H.DURGA
VILLAGE
HULIYURDURGA HILL

ಹುಲಿಯೂರು ದುರ್ಗದ ಇತಿಹಾಸ

edit

ಸ್ಥಳ ಪರಿಚಯ :-

edit

ಹುಲಿಯೂರು ದುರ್ಗವು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿಗೆ ಸೇರಿದ ಒಂದು ಹೋಬಳಿ ಕೇಂದ್ರ. ಈ ಊರಿಗೆ ಕುಣಿಗಲ್ ನಿಂದ ಬೆಂಗಳೂರು-ಮೈಸೂರು ಹೆದ್ದಾರಿಯಾದ ಮಂಡ್ಯ ಜಿಲ್ಲೆಯ ಮದ್ದೂರು ರಸ್ತೆ ಹಾದುಹೋಗಿದೆ. ಇಲ್ಲಿ ಕುಂಭಿ ಬೆಟ್ಟ, ಹೇಮಗಿರಿ ಬೆಟ್ಟಗಳು ಊರಿನ ಸರಹದ್ದಿನಲ್ಲಿಯೇ ಇವೆ. ಊರಿನ ಪೂರ್ವ ಭಾಗವು ಕುರುಚಲು ಕಾಡಿನಿಂದ ಆವೃತ್ತ ವಾಗಿದೆ.

ಹುಲಿಯೂರು ದುರ್ಗವು ಮಾಗಡಿ ಕೆಂಪೇಗೌಡರು ನಿರ್ಮಿಸಿದ ಏಳು ಸುತ್ತಿನ ಕೋಟೆಗಳಲ್ಲಿ ಒಂದು. ಇದು ಹೆಸರಿಗೆ ತಕ್ಕಂತೆ ದುರ್ಗದಿಂದ ಆವೃತವಾಗಿರುವ ಪ್ರದೇಶ.

ಈ ಬೆಟ್ಟ ಕುಂಭದ (ಬಿಂದಿಗೆ) ಆಕಾರದಲ್ಲಿರುವುದರಿಂದ ಇದು ಕುಂಭಿ ಬೆಟ್ಟ ಎಂದೂ ಜನಪ್ರಿಯವಾಗಿದೆ.

 
hill

ಕೆಳಗಿನಿಂದ ನೋಡಿದರೆ ಮಡಕೆಯಂತೆ ಕಾಣುತ್ತದೆ. ಸಮೀಪದಲ್ಲಿಯೇ ಹೇಮಗಿರಿ ಬೆಟ್ಟವಿದೆ.[1]

ಹೆಸರಿನ_ಇತಿಹಾಸ:-

edit

ಹಿಂದೆ ಅಂದರೆ 1540ನೇ ಇಸವಿಯವರೆಗೂ ಇದನ್ನು ಹುಲಿಯೂರು ಎಂದು ಕರೆಯುತ್ತಿದ್ದರು, ಏಕೆಂದರೆ ಹುಲಿಗಳು ಈ ಪ್ರದೇಶದಲ್ಲಿ ಜಾಸ್ತಿ ಇದ್ದವು ಹಾಗಾಗಿ ಹುಲಿಯೂರು ಎಂದು ಕರೆಯುತ್ತಿದ್ದರು. ಇದಕ್ಕೆ ಸಾಕ್ಷಿಯಾಗಿ ನಮಗೆ ದೊರೆತಿರುವ 1540ರ ಉಜ್ಜನಿ ಶಾಸನದಲ್ಲಿ ಕೇವಲ ಹುಲಿಯೂರು ಎಂಬ ಹೆಸರನ್ನು ಪ್ರಸ್ಥಾಪಿಸಲಾಗಿದೆ. 16ನೇ ಶತಮಾನದ ಕೊನೆಯ ಭಾಗದಲ್ಲಿ ಕೆಂಪೇಗೌಡನು ದುರ್ಗಮ ಕುಂಭಿ ಬೆಟ್ಟದಲ್ಲಿ ಕೋಟೆಯನ್ನು ಕಟ್ಟಿದ ನಂತರ ಹುಲಿಯೂರಿನ ಜೊತೆ ದುರ್ಗ ಸೇರಿಕೊಂಡು ಹುಲಿಯೂರುದುರ್ಗವಾಯಿತು ಎನ್ನುತ್ತದೆ ಇತಿಹಾಸ

ಇತಿಹಾಸ:-

edit

ಹುಲಿಯೂರುದುರ್ಗವನ್ನು ಐತಿಹಾಸಿಕವಾಗಿ ನೋಡಿದಾಗ ಶಿಲಾಯುಗದ ನೆಲೆಗಳು ಇಲ್ಲಿ ಕಂಡು ಬರುತ್ತವೆ.

ಹುಲಿಯೂರುದುರ್ಗದ ಹೇಮಗಿರಿ ತಪ್ಪಲು, ತಿಪ್ಪಸಂದ್ರ ಗಳಲ್ಲಿ ಶಿಲಾಯುಗದ ಅವಶೇಷಗಳು ಕಾಣಬರುತ್ತವೆ. ಕುಣಿಗಲ್ ನಾಡಿನ ಜೊತೆ ಕೆಲ ಭಾಗಗಳಲ್ಲಿ ಕದಂಬರ ಆಳ್ವಿಕೆಯಿತ್ತು ಎನ್ನುತ್ತಾರೆ ಎಸ್.ಶ್ರೀಕಂಠಶಾಸ್ತ್ರಿಯವರು. ನಮಗೆ ನಿಖರ ದಾಖಲೆಗಳು ಕಂಡುಬರುವುದು ಗಂಗರ ಕಾಲದಿಂದ. ಗಂಗವಾಡಿ 960ಕ್ಕೆ ಒಳಪಡುವ ಪ್ರದೇಶದಲ್ಲಿ ಕುಣಿಗಲ್ ಜೊತೆ ಹುಲಿಯೂರುದುರ್ಗವು ಸಹ ಒಂದು. ಗಂಗರ ಪ್ರಸಿದ್ಧನಾದ ದೊರೆ ಶ್ರೀಪುರುಷನು(ಕ್ರಿ.ಶ.725-798) 8ನೇ ಶತಮಾನದ ಕೊನೆಯಲ್ಲಿ ಕುಣಿಗಲ್, ಹುಲಿಯೂರು, ಅಮೃತೂರು, ಯಡಿಯೂರನ್ನು  ಗಂಗರ ಶ್ರೀಪುರುಷನು ಆಳಿದ ಬಗ್ಗೆ ದಾಖಲೆಗಳು ದೊರೆಕಿವೆ.

ಗಂಗರು ರಾಷ್ಟ್ರಕೂಟರಿಗೆ ಸೋತ ನಂತರ ಚಾಲುಕ್ಯರು ಆಳುತ್ತಾರೆ. ಗಂಗರ ಹಾಗೂ ರಾಷ್ಟ್ರಕೂಟರ ಪತನಾನಂತರ ಚೋಳರ ಆಳ್ವಿಕೆಗೆ ಒಳಪಡುತ್ತದೆ. ರಾಜೇಂದ್ರ ಚೋಳಪುರಂ ಎಂದು ಕುಣಿಗಲ್ಲನ್ನು ಶಾಸನಗಳಲ್ಲಿ ಕರೆದಿದೆ. ನಂತರ ಹೊಯ್ಸಳರ ಆಳ್ವಿಕೆಗೆ ಒಳಪಡುತ್ತದೆ. ಇದರ ಸಾಕ್ಷಿಯಾಗಿ ಹೊಯ್ಸಳರ ಕಾಲದ ಸೋಮೇಶ್ವರ ದೇವಾಲಯ ಕುಣಿಗಲ್ ಕೆರೆಯ ಏರಿಯ ಮೇಲೆ ಇರುವುದನ್ನು ಕಾಣಬಹುದು. ಹೊಯ್ಸಳರ ನಂತರ ವಿಜಯನಗರದ ಅರಸರ ಆಳ್ವಿಕೆಗೆ ಹುಲಿಯೂರು ಮತ್ತು ಕುಣಿಗಲ್ ಒಳಪಟ್ಟ ಬಗ್ಗೆ ಶಾಸನಗಳಿಂದ ತಿಳಿಯಬಹುದು. ಬುಕ್ಕರಾಯನು ಕ್ರಿ.ಶ1369ರ ಸುಮಾರಿನಲ್ಲಿ ಕೆತ್ತಿಸಿರುವ ಶಾಸನದಿಂದ ತಿಳಿದು ಬರುತ್ತದೆ. ವಿಜಯನಗರದ ಸಾಮಂತನಾಗಿದ್ದ ತಮ್ಮೇಗೌಡನೆಂಬ ಸಾಮಂತನು ಹುಲಿಯೂರುದುರ್ಗದ ವಧುವನ್ನು ವಿವಾಹವಾಗಿದ್ದನು, ಹಾಗಾಗಿ ಹುಲಿಯೂರುದುರ್ಗದ ಬಗ್ಗೆ ನಿಕಟ ಸಂಬಂಧ ಹೊಂದಿದ್ದನು. ವಿಜಯನಗರದ ಆಳ್ವಿಕೆಯಲ್ಲಿ ಸಾಮಂತರಾಗಿ ಇಮ್ಮಡಿ ಕೆಂಪೇಗೌಡ ಮತ್ತು ಮುಮ್ಮಡಿ ಕೆಂಪೇಗೌಡರ ಆಳ್ವಿಕೆಗೆ ಒಳಪಟ್ಟ ಬಗ್ಗೆ ತಿಳಿಯುತ್ತದೆ. ಹುಲಿಯೂರಿನಲ್ಲಿ ಕೆಂಪೇಗೌಡನು ಕ್ರಿ.ಶ.1580ರ ಸುಮಾರಿನಲ್ಲಿ ದುರ್ಗ(ಕೋಟೆ)ವನ್ನು ಕಟ್ಟುವ ಮೂಲಕ ಅದು ಹುಲಿಯೂರುದುರ್ಗ ಎಂದಾಯಿತು. ಅದೇ ವೇಳೆಗೆ ಹುತ್ರಿದುರ್ಗದಲ್ಲಿ ಸಹ ಕೋಟೆಯೊಂದನ್ನು ನಿರ್ಮಿಸಿದನು.

ಹುತ್ರಿದುರ್ಗದ ಇತಿಹಾಸ ತಿಳಿಯುವುದಕ್ಕೆ ಹೀಗಾಗಿ ಕೆಂಪೇಗೌಡನ ಆಳ್ವಿಕೆಗೆ ಈ ಪ್ರದೇಶ ಸೇರಿದ್ದ ಬಗ್ಗೆ ಸ್ಪಷ್ಟವಾಗಿ ತಿಳಿಯುತ್ತದೆ. ಹಂದಲಗೆರೆ(ತಾವರೆಕೆರೆ ಪಂಚಾಯ್ತಿ)ಗ್ರಾಮದಲ್ಲಿನ ಅಪ್ರಕಟಿತ ಶಾಸನವೊಂದರಲ್ಲಿ (ಕಾಲ ಕ್ರಿ.ಶ.1663) ದತ್ತಿಯನ್ನು ಬಿಟ್ಟ ಬಗ್ಗೆ ತಿಳಿಯಬಹುದಾಗಿದೆ. ಶಾಸನ ಸಾಕಷ್ಟು ತೃಟಿತಗೊಂಡಿರುವುದರಿಂದ ಅದನ್ನು ಓದಲು ಸಾಧ್ಯವಾಗುತ್ತಿಲ್ಲ. ಕೆಂಪೇಗೌಡನ ನಾಟಕ ಶಾಲೆಯ ಶೃಂಗಾರಮ್ಮನು ಹುಲಿಯೂರುದುರ್ಗದ ಪಕ್ಕದಲ್ಲಿ 'ಶೃಂಗಾರ ಸಾಗರ' ಎಂಬ ಕೆರೆಯನ್ನು, ಅಗ್ರಹಾರವನ್ನು ನಿರ್ಮಿಸಿದ ಬಗ್ಗೆ ಶಾಸನಗಳು ತಿಳಿಸುತ್ತವೆ. ನಂತರ ಮೈಸೂರಿನ ಓಡೆಯರ್ ಹಾಗೂ ಹೈದರಾಲಿ(ಟಿಪ್ಪುಸುಲ್ತಾನ್ ನ ತಂದೆ), ಆತನ ನಂತರ ಟಿಪ್ಪು ಸುಲ್ತಾನ್ ಸಹ ಆಳಿದರು. ಕುಣಿಗಲ್ ನಲ್ಲಿ ಅಶ್ವ ವರ್ಧನ ಶಾಲೆ(ಸ್ಟಡ್ ಫಾರ್ಮ್)ಯನ್ನು ಹೈದರ್ ಆಲಿಯು ಮೈಸೂರು ಸೇನೆಗೆ ಸೇರ್ಪಡೆಗೊಂಡ ಅರಬ್ಬಿ ಯುದ್ದಾಶ್ವಗಳ ಸಾಕಾಣಿಕೆ ಹಾಗೂ ವರ್ಧನೆಗಾಗಿ ಸ್ಥಾಪಿಸಿದನು. ಈ ಹುಲಿಯೂರುದುರ್ಗದ ಪ್ರದೇಶ ಕೆಂಪೇಗೌಡರ ಆಳ್ವಿಕೆಗೆ ಸೇರಿತ್ತು ಎನ್ನುವುದಕ್ಕೆ ಮತ್ತೊಂದು ಪ್ರಮುಖ ಸಾಕ್ಷಿಯೊಂದಿದೆ. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಸಾಕ್ಷಿಯಾಗಿ ಗ್ರಂಥಗಳು ಸಿಗುತ್ತವೆ. ಅಲ್ಲದೆ ಶ್ರೀರಂಗಪಟ್ಟಣದ ಟಿಪ್ಪು ಸುಲ್ತಾನನ ಗಂಜಾಂ ಅರಮನೆಯಲ್ಲಿಯೂ ಹುಲಿಯೂರುದುರ್ಗದ ಕೋಟೆಯ ಚಿತ್ರವಿದೆ. ಬೆಟ್ಟದ ಮೇಲ್ಭಾಗದ ಏಳು ಸುತ್ತಿನ ಕೋಟೆಯೊಳಗೆ ಸದಾ ತುಂಬಿರುವ ಗಂಗೆ-ಗೌರಿ ಕೊಳ ಕಾಣಸಿಗುತ್ತದೆ. ಅಲ್ಲಿ ಕುದುರೆಗಳಿಗೆ ಮೇವನ್ನು ಸಂಗ್ರಹಿಸಿಡುವ ಧಾನ್ಯದ ಕಣಜವೂ ಇದೆ. ಯುದ್ಧಕ್ಕೆ ಬೇಕಾದ ಮದ್ದು ತಯಾರಿಸುವ ಮದ್ದಿನ ಮನೆ, ಬೀಸುವ ಕಲ್ಲು, ಹಿಂದಿನ ಕಾಲದ ಅಡುಗೆ ಮನೆ, ಸ್ನಾನ ಗೃಹಗಳ ಶಿಥಿಲಾವಸ್ಥೆಯ ಕುರುಹುಗಳು ಕಾಣಸಿಗುತ್ತವೆ.

ಹುಲಿಯೂರುದುರ್ಗದಲ್ಲಿ_ಏನೆನಿದೆ?

edit

ಇಲ್ಲಿರುವ ಬೆಟ್ಟವನ್ನು ಹತ್ತಿ ಅದರ ತುತ್ತತುದಿ ತಲುಪಬೇಕಾದರೆ ಸ್ಥಳೀಯರ ಮಾರ್ಗದರ್ಶನ ಅಗತ್ಯ.

ಕೆಳಗೆ ನೋಡಿದರೆ ಪಾತಾಳ ದರ್ಶನ. ಮೇಲಕ್ಕೆ ಹತ್ತಲು ಮೆಟ್ಟಿಲುಗಳ ಸಹಾಯವಿಲ್ಲ. ಪರಸ್ಪರ ಬೆರಳುಗಳನ್ನೇ ಆಧಾರವಾಗಿ ಮಾಡಿಕೊಂಡು ಮೇಲಕ್ಕೆ ಹತ್ತಬೇಕು. ಸ್ವಲ್ಪ ಆಯ ತಪ್ಪಿದರೂ ಕೆಳಗೆ ಬೀಳುವ ಅಪಾಯ ತಪ್ಪಿದ್ದಲ್ಲ.

ಬೆಟ್ಟದ ತುತ್ತತುದಿಗೆ ಹತ್ತಬೇಕಾದರೆ ಮಧ್ಯೆ ನಮಗೆ ಗಣಪತಿ ದರ್ಶನ ಭಾಗ್ಯ ಲಭ್ಯವಾಗುತ್ತದೆ. ಇಲ್ಲಿನ ಉದ್ಭವ ಗಣಪತಿಯು ಕುಂಭದ ಆಕಾರದ ಬೆಟ್ಟದಲ್ಲಿರುವುದರಿಂದ ಕುಂಭಿ ಮಹಾಗಣಪತಿ ಎಂದೇ ಕರೆಯಲಾಗುತ್ತದೆ. ಹಿಂದಿನ ಕಾಲದಲ್ಲಿ ಈ ಪ್ರದೇಶದಲ್ಲಿ ಕಾಡು ದಟ್ಟವಾಗಿದ್ದು, ಇಲ್ಲಿನ ಬೆಟ್ಟ ಚಾರಣಿಗರಿಗೆ ಹೇಳಿಮಾಡಿಸಿದಂತಿದೆ ಈ ಸ್ಥಳ.

ಬೆಟ್ಟ ಏರುತ್ತಾ ಹೋದಂತೆ ಕೆಳಗೆ ನೋಡಿದರೆ ಅಲ್ಲಿ ಪ್ರಪಾತವೊಂದು ಕಾಣುತ್ತದೆ. ಅದನ್ನು ನೋಡಿದರೆ ಎದೆಯಲ್ಲಿ ನಡುಕ ಉಂಟಾಗುತ್ತದೆ. ಸ್ಥಳಿಯರ ಸಹಾಯ ಮಾರ್ಗದರ್ಶನ ಪಡೆದರೆ ನಿಮಗೆ ಬೆಟ್ಟ ಹತ್ತಲು ಸುಲಭವಾಗುತ್ತದೆ. ಇಂತಹ ಕಡಿದಾದ ಕಠಿಣ ಬೆಟ್ಟವನ್ನು ಹತ್ತಿದರೆ ಅಲ್ಲಿ ಅಪೂರ್ವ ಪ್ರಕೃತಿ ಸೌಂದರ್ಯದ ರಾಶಿ ಕಣ್ಣಮುಂದೆ ಬಂದು ನಿಲ್ಲುತ್ತದೆ. ನಭೋಮಂಡಲಕ್ಕೆ ತಾಗಿಕೊಂಡಿರುವ ಆಕಾಶ, ತಂಪಾದ ಹೊಂಗಾಳಿ ನಮ್ಮ ಮೈಯನ್ನು ತಾಗಿ, ರೋಮಾಂಚನವನ್ನು ಉಂಟು ಮಾಡುತ್ತದೆ. ಬೆಟ್ಟದ ಮೇಲಿಂದ ನಿಂತು ನೋಡಿದಾಗ ಭೂಮಾತೆಯ ಸೌಂದರ್ಯದ ಸೊಬಗಿನ ಅರಿವು ನಮಗಾಗುತ್ತದೆ. ಮೈ-ಮನಗಳಲ್ಲೆಲ್ಲಾ ಅದೇನೋ ಪುಳಕ. ಹಿಂದೆ ಈ ಬೆಟ್ಟದಲ್ಲಿ ಮಾಗಡಿ ಕೆಂಪೇಗೌಡರು ಕುದುರೆಗಳನ್ನು ಹತ್ತಿಸುತ್ತಿದ್ದರಂತೆ! ಕುಂಭಿ ಬೆಟ್ಟದ ಮೇಲ್ಭಾಗದ ಏಳು ಸುತ್ತಿನ ಕೋಟೆಯೊಳಗೆ ಸದಾ ತುಂಬಿರುವ ಗಂಗೆ-ಗೌರಿ ಕೊಳ ಕಾಣಸಿಗುತ್ತದೆ. ಅಲ್ಲಿ ಕುದುರೆಗಳಿಗೆ ಮೇವನ್ನು ಸಂಗ್ರಹಿಸಿಡುವ ಧಾನ್ಯದ ಕಣಜವೂ ಇದೆ. ಯುದ್ಧಕ್ಕೆ ಬೇಕಾದ ಮದ್ದಿನ ಮನೆ, ಬೀಸುವ ಕಲ್ಲು, ಹಿಂದಿನ ಕಾಲದ ಅಡುಗೆ ಮನೆ, ಸ್ನಾನ ಗೃಹಗಳ ಶಿಥಿಲ ಕುರುಹುಗಳು ಕಾಣಸಿಗುತ್ತವೆ. ಇಂತಹ ಅಪೂರ್ವ ಸ್ಥಳವನ್ನು ಪ್ರಾಚ್ಯವಸ್ತು ಇಲಾಖೆಯಾಗಲಿ, ಸರಕಾರವಾಗಲಿ ಸಂರಕ್ಷಿಸಿ ಕಾಪಿಟ್ಟರೆ ಇದೊಂದು ಸ್ಮಾರಕವಾಗಿ ಸದಾ ನೆನಪಿನಲ್ಲಿ ಉಳಿಯುತ್ತದೆ.

ಶತ್ರುಗಳಿಂದ ರಕ್ಷಣೆ ಪಡೆಯುವುದೇ ಬೆಟ್ಟಕ್ಕೆ ಏಳು ಸುತ್ತಿನ ಕೋಟೆ ನಿರ್ಮಿಸಿರುವುದರ ಹಿಂದಿನ ಆಲೋಚನೆ. ಬೆಟ್ಟದ ಎರಡನೇ ಸುತ್ತಿನ ಕೋಟೆಯಲ್ಲಿನ ಪ್ರವೇಶ ದ್ವಾರ ನಮ್ಮನ್ನು ಸ್ವಾಗತಿಸುತ್ತದೆ. ಅದೇ ಮಾರ್ಗದಲ್ಲಿ ವೇಣುಗೋಪಾಲ ಸ್ವಾಮಿ ಮತ್ತು ಲಕ್ಷ್ಮೀ ದೇವಸ್ಥಾನವಿದೆ. ಆದರೆ ಲಕ್ಷ್ಮೀ ದೇಗುದಲ್ಲಿ ದೇವಿಯ ವಿಗ್ರಹವನ್ನು ಹಾಳುಗೆಡವಲಾಗಿದೆ. ಪಶ್ಚಿಮಾಭಿಮುಖವಾಗಿ ಮಂಟಪದ ದ್ವಾರದ ಮೂಲಕ ಪ್ರಯಾಣ ಮಾಡಿದರೆ ನಾಲ್ಕನೇ ಸುತ್ತಿನಲ್ಲಿ ಈಶ್ವರನ ಪಾಳು ದೇಗುಲವನ್ನು ನೋಡಬಹುದು. ಏಳನೇ ಸುತ್ತಿನ ಕೋಟೆಯೊಳಗೆ ಪ್ರವೇಶಿಸಿ ಬೆಟ್ಟದ ತುತ್ತತುದಿ ತಲುಪಬೇಕಾದರೆ ಇಳಿಜಾರಾದ ಬಂಡೆಯನ್ನು ಏರಬೇಕಾಗುತ್ತದೆ. ಸುತ್ತಮುತ್ತಲ ಪ್ರದೇಶಗಳು ಕೂಡ ಇತಿಹಾಸ ಪ್ರಸಿದ್ಧವಾಗಿವೆ. ಇಂತಹ ಐತಿಹಾಸಿಕ ಹುಲಿಯೂರುದುರ್ಗ ನೋಡಲು ರಮ್ಯವಾಗಿದ್ದು, ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ. ಚಾರಣಿಗರಿಗೆ ಸವಾಲು ಹಾಕುವಂತಿದೆ ಹುಲಿಯೂರುದುರ್ಗ.[1]

ತಲುಪುವ_ದಾರಿ

edit

ಕುಣಿಗಲ್-ಮದ್ದೂರು ಮಾರ್ಗದ ಮಧ್ಯೆ ಹುಲಿಯೂರುದುರ್ಗವಿದೆ. ಕುಣಿಗಲ್ ನಿಂದ 26 ಕಿಲೋಮೀಟರ್ ಇದ್ದರೆ, ಮದ್ದೂರಿನಿಂದ 30 ಕಿಲೋಮೀಟರ್ ಇದೆ. ಬೆಂಗಳೂರಿನಿಂದ ಹೋಗುವವರು ಮಾಗಡಿ ಮಾರ್ಗವಾಗಿಯೂ ಹೋಗಬಹುದು. ಅಥವಾ ತುಮಕೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಹಾದು ನೆಲಮಂಗಲದ ಮುಖಾಂತರ ಕುಣಿಗಲ್ ರಸ್ತೆಯಲ್ಲಿ ಅಂದರೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಹೋಗಿ ಕುಣಿಗಲ್ ನಿಂದ ಎಡಗಡೆ ತಿರುವು ಪಡೆದು ಮದ್ದೂರು ರಸ್ತೆಯಲ್ಲಿ ಹೋದರೆ ಹುಲಿಯೂರುದುರ್ಗವನ್ನು ತಲುಪುವಿರಿ. ಇಲ್ಲಿಂದ ಒಟ್ಟು ದೂರ 80 ಕಿಲೋಮೀಟರ್ ಅಷ್ಟೆ. ರಸ್ತೆ ಕೂಡ ಚೆನ್ನಾಗಿದೆ.

REFERENCE

edit
  1. ^ "Huliyurdurga", Wikipedia, 2019-09-29, retrieved 2020-09-11